Saturday, October 12, 2019

ಮಳಿ ಅನ್ನೂದು ಪೊಲೀಸ್ರನ್ನು ಕಳ್ಳನ ಮಾಡಿ ಇಟ್ಟಿತಲ್ಲಪಾ

ಈ ಮಳಿಗೆ ಪೊಲೀಸರಿಗೂ ಆಗಿ ಬರಾಂಗಿಲ್ಲ ಅಂತ ಕಾನ್ತೈತಿ. ಯಾವ ಜನ್ಮದಾಗ ಇಬ್ಬರಿಗೂ ಎನ್ ಇರ್ಷೆ ಇತ್ತ ಎನೋ, ಈ ಭವ ಬಂಧನಗಳನ್ನೆಲ್ಲ ಕಳ್ಕೊಂಡ ಮಳೆ ಅನ್ನೊದು ಮುಗಲಾಗ ಹೋಗಿ ಕುಂತ್ರ, ಈ ಪೊಲೀಸ್ ಅನ್ನಾಂವ ಇನ್ನೂ ಎನೋ ಮಾಡಬೇಕಾಗಿ ಉಳ್ದೈತಿ ಎನೋ ಅದಕ ಇನ್ನೂ ಭೂಮು ಮ್ಯಾಲ ಉಳ್ಕೊಂಡಾನ. ಆದ್ರ ಮಳಿ ಅನ್ನೂದು ಬಂಧನಗಳನ್ನ ಕಳ್ಕೊಂಡ್ರೂ ಡ್ಯೂಟಿ ಒಳಗ ಅವಾಗವಾಗ ಬಂದ ಕಾಡ್ತಿರ್ತೈತಿ. ಅದರಾಗ ಟ್ರಾಫಿಕ್ ಪೊಲೀಸರಿಗಂತೂ ಮಳಿಗಿ ಅವ್ರಿಗಿ ಅತ್ತಿ ಸೊಸಿ ಸಂಬಂಧ ಇದ್ಹಾಂಗ್. ಅತ್ತಿ ಮಳಿ ಆದ್ರ ಪೊಲೀಸರು ಸೊಸಿ ಇದ್ಹಾಂಗ್. ಡ್ಯೂಟಿ ಮಾಡೂ ಸಂದರ್ಭದೊಳಗ ಹೊರಗಡೆ ಎಲ್ಲಕಡೆಗೂ ತಂಪ ವಾತಾವರಣ ಇದ್ರೂ ಪೊಲೀಸರ ಮನಸ್ಸಿನೊಳಗ ಕುದಿತಿರ್ತೈತಿ. ಆದ್ರ ಎಷ್ಟ ಸಿಟ್ಟ ಬಂದ್ರೂ ತೊರ್ಸಕೊಳ್ಳುವಂಗಿಲ್ಲ. ಎಲ್ಲಾ ಹೊಟ್ಟ್ಯಾಗ್ ಹಾಕೊಂಡ್ ಡ್ಯೂಟಿ ಮಾಡ್ಬೇಕು.
          ಮಳಿಗಿ ಪೊಲೀಸರಿಗೂ ಹ್ಯಾಂಗ್ ಹಾವು ಮುಂಗಲಿ ಸಂಬಂಧ ಅಂತ ಕೇಳಬಹುದು. ಮಳಿ ಬಂದ್ರಂತೂ ಟ್ರಾಪಿಕ್ ಜಾಮ್ ತುಂಬಿ ತುಳಕತೈತಿ. ಅದರಾಗೂ ದೊಡ್ಡದೊಡ್ಡ ಸರ್ಕಲ್ ಜಾಗಾ ಒಳಗ ಜಾಸ್ತಿ.  ಮಳಿ ಬಂತು ಲಗೂ ಮನೆಗೆ ಹೊಗೂನು ಅನ್ನು ಮಂದಿ ಒಂದಕಡೆಯಾದ್ರ, ಮುಂದಿನ ಹಾದಿ ಕಾನ್ಲಾರ್ದ ಮಂಜನಾಗ ಅಜಮಸ ಗಾಡಿ ಹೊಡೆಯೂ ಮಂದಿ ಇನ್ನೊಂದ ಕಡೆ. ರೊಡ್ ಎಲ್ಲಾ ತುಂಬಿ ಎಲ್ಲಿ ತೆಗ್ಗು-ದಿಣ್ಣೆ ಅದಾವು ಎಲ್ಲಿ ಡಿವೈಡರ್ ಅದಾವು ಅನ್ನೂದ ಸೈತ್ ಕಾಣುದಿಲ್ಲ.

ಇವು ಗಾಡಿಗೊಳ ಗತೀ ಆದ್ರ, ಇನ್ನ ಮಂದಿ ಕಥೀ ಹೆಳೂದ ಬ್ಯಾಡ. ಕೆಲವೊಬ್ರು ಮಳಿ ಬಂದಾಗ ಆಸರೆಗೆ ನಿಲ್ಲಾಕ ಓಡೂದು ಒಂದ ಕಡೆ ಆದ್ರ, ಇನ್ನೊಬ್ರು, ಮನೀಗೆ ಹೊಗಾಕ್ ಯಾವ್ದ ನಿಂತಿರ್ತೈತಿ ಆ ಬಸ್ ಒಳಗ ಕುಂಡ್ರಾಕ ಓಡು ಮಂದಿ ಇನ್ನೊಂದ ಕಡೆ. ಈ ಎರಡೂ ತರಾ ಮಂದಿಗೆ ರೋಡ್ ಒಳಗಡೆ ಬರೂ ಬ್ಯಾರೆ ಗಾಡಿಗಳು ಕಾಣೂದೇ ಇಲ್ಲ. ಒಟ್ರಾಸಿ ಹೋಗೂದು, ಒಟ್ಟ ಆಸರ ಸಿಕ್ಕರ ಸಾಕ ಇವ್ರಿಗಿ.
ಇದನ್ನೆಲ್ಲಾ ನೋಡ್ಕೊಂತ ರೊಡನ್ಯಾಗ್ ನಿಂತ ಎಲ್ಲಾರ್ನೂ ಸಂಬಾಳ್ಸಾಕ್ ಪೊಲೀಸರಿಗಂತೂ ಸಾಕ ಸಾಕಾಗಿ ಹೋಗತೈತಿ. ಪೊಲೀಸರಿಗಿ ಹತ್ತ ಕೈ, ನಾಲ್ಕೈದ ಬಾಯಿ ಇದ್ರ ಆ ಮಾತ ಬ್ಯಾರೆಪಾ, ಎರಡ ಕೈ, ಒಂದ ಬಾಯಿಯೊಳಗ ಎಲ್ಲಾರ್ನೂ ಸಂಬಾಳ್ಸಿ ಕಳ್ಸಬೇಕು. ಹಂತಾದ್ರಾಗ ಟ್ರಾಪೀಕ್ ಜಾಮ್ ಆದ್ರ ಇದನ್ನೆಲ್ಲ ಎದಕ್ ಅಂತ ಯೋಚನೆ ಮಾಡೂದ ಅಲ್ಲ ಕೆರ್ಕೊಳಾಕೂ ಪುರ್ಸತ್ ಇರಲ್ಲ.
ಇನ್ನ ಯಾವ ಟೈಮ್ ಒಳಗ ಯಾರಿಗಾದ್ರೂ ಫೈನ್ ಹಾಕಿದ್ರ ಹಂತಾವ್ರಿಗಿ ಇ ಮಳಿ ಹತ್ತಿದಾಗ ಚಾನ್ಸ್ ಸಿಗ್ತೈತಿ. ಸುಮ್ಮ ಸುಮ್ಮನ ಹಾರ್ನ್ ಹಾಕುದು, ಪೊಲೀಸರ ಮುಂದ ಹೆಲ್ಮೆಟ್ ತಗದ ಒಟ್ರಾಸಿ ಹೊಗೂದು. ಕೆಲವೊಬ್ರಂತೂ ಇದ ಚಾನ್ಸ್ ಅಂತ ದೂರಿಂದ ಕೆಸರ ಮೈಮ್ಯಾಲ ಒಗದ ತಮ್ಮ ಅತೃಪ್ತ ಆತ್ಮಗಳನ್ನ ಸಂತೃಪ್ತ ಮಾಡ್ಕೋತಾರು.
ಇನ್ನೊಂದ ಮಾತ ಹೇಳಬೇಕ ಅಂದರ ಪೊಲೀಸರು ಅಂದ್ರ ಯಾವತ್ತೂ ಟಿಪ್-ಟಾಪ್ ಟ್ರೆಸ್ ಹಾಕೊಂಡ ಇರ್ಬೇಕ್ ಆಗ್ತೈತಿ. ರೋಟ್ ಒಳಗ ಒಬ್ಬ ಪೊಲೀಸ್ ಯೂನಿಪಾರ್ಮ್ ಒಳಗ ನಡ್ಕೊಂಡ ಹ್ವಂಟ್ರ ಎಲ್ಲರ ಕಣ್ಣ ಅವ್ರಮ್ಯಾಲ ಇರ್ತಾವು. ಮತ್ತ ಡಿಸಿಪ್ಲೇನ್ ಇಲಾಖೆ ಆದ್ದರಿಂದ ಯಾವತ್ತು ಕ್ಲೀನ್ ಬಟ್ಟೆ, ಐರನ್ ಮಾಡಿ ಕಡಕ್ ಇಟ್ಟಿರಬೇಕಾಗ್ತೈತಿ. ಬೆಳಗ್ಗೆ ಎದ್ದ ಗರಿಗರಿ ಡ್ರೆಸ್ ಹಾಕೊಂಡ ಡ್ಯೂಟಿಗೆ ಹೋಗ್ತಿರ್ಬೇಕಾದ್ರ ಮಳಿ ಬಂದ್ರಂತೂ ಆ ಪೊಲೀಸರ ಮೋತಿ ನೋಡೂದ ಬ್ಯಾಡ. ರೊಡ್ ಒಳಗ ಯಾವ್ದರೆ ಗಾಡಿ ಹಾದ್ ಹ್ವಾದ್ರ ಸಿಡದ ಒಮದ ಹನಿ ಕಲೀ ಬಿದ್ದ ತೆಲ್ಯಾಗಿನ ಬಿಳಿಕೂದ್ಲಿನಂಗ ಅದ ಎದ್ದ ಕಾನ್ತಿರತೈತಿ.
ಇವೆಲ್ಲ ಟ್ರಾಫೀಕ್ ಟ್ಯೂಟಿಯೊಳಗಿನ ಸಮಸ್ಯೆ ಆದ್ರ, ಇನ್ನ ತನಿಖೆ ಸಮಯದೊಳಗ ಮಳಿ ಅನ್ನೂದು ಬಾಳ ತ್ರಾಸ್ ಕೊಡ್ತದ. ಒಪನ್ ಎರಿಯಾದೊಳಗ ಯಾವ್ದರೆ ಕೊಲೆ, ಕಳ್ಳತನ ಆಗಿ ಬಿಟ್ರಂತೂ ಸಾಕ್ಷಿ ಉಳಕೊಳ್ಳೂದು ಬಾಳ ದುರ್ಲಬ. ಮೊದಲ ಅಲ್ಲಿರುವ ಪಿಂಗರ್ ಪ್ರಿಂಟ್ ಆರಿ ಹ್ವಾದ್ರ, ಇನ್ನೊಂದ ಅಪರಾಧ ನಡೆದ ಗಟೆಯೊಳಗಿನ ವಾಸನೆ ಹಾರಿ ಹೋಗಿ ನಮ್ಮ ಪೊಲೀಸ್ ನಾಯಿಗಳು ಬಂದು ಮುಸು ಮುಸು ನೋಡಿ ಅಲ್ಲೆ ನಿಲ್ತಾವು. ಇನ್ನ ರಕ್ತ ಬಿದ್ದಿದ್ರಂತೂ ಮುಗದ ಹೊತ. ನಾಳಿ ಕೊರ್ಟ್ ಒಳಗ ಏನ್ ಸಾಕ್ಷಿ ಕೊಡೂನು ಪಾ ಶಿವನ ಅಂತ ದಂಗ ಬಡ್ದಾವ್ರ ತರಾ ಕುಂದ್ರಬೇಕಾಗ್ತದ. ಅದಕ್ಕ ಪೊಲೀಸ್ರು ದೇವ್ರ ಗತ್ರ ಬೇಡೂದು ಎರಡ ವಿಚಾರ. ಇವತ್ತ ನಮ್ಮ ಊರನ್ಯಾಗ ಎನೂ ಕೆಟ್ಟದ ಆಗಬಾರ್ದಪಾ ಶಿವನ ಒಂದ ವೆಳೇ ಆದ್ರೂ ಅವಾಗ ಮಳಿ ಬರ್ಬಾರ್ದಪಾ ಅಂತ. ಮಳಿ ಅನ್ನೂದು  ಒಂದ ಕಡೆ  ನಮ್ಮನ್ನ ಒದ್ದೆ ಮಾಡಿ ಮಳಿ ತ್ರಾಸ್ ಕೊಟ್ರ ಇನ್ನೊಂದು ಥಂಡಿ. ನೈಟ್ ಡ್ಯೂಟಿ ಹ್ವಾದಾಗಂತೂ ದೇವ್ರ ಭೇಟಿ ಆಗ್ತಾನು. ರೆನ್ ಕೊರ್ಟ್ ಹಾಕೊಂಡ ಮೈಯೆಲ್ಲ ನೀರ್ ಸೊರಿಸಿಕೊಂಡ ಒಂತರಾ ಒಡದ ಪುಡಬಲ್ ಗಡೀಗಿ ಆಗಿರ್ತಿವಿ. ಮಳಿ ನಿಂತ ಮ್ಯಾಲ ಅದನ್ನ ತಗಿಯೂವಂಗಿಲ್ಲ, ಹಂಗ ಹಾಕೊಂಡ ಇರೂವಂಗಿಲ್ಲ.
ಒಮ್ಮಿ ಎನ್ ಆಗಿತ್ಪಾ ಅಂದರ, ಪೊಲೀಸ್ ಒಳಗ ರಾತ್ರಿ ಕಳ್ಳತನ ತಡೆಗೆಟ್ಟಾಕ ಯೂನಿಪಾರ್ಮ ಒಳಗ ಹ್ವಾದ್ರ ಡೌಟ್ ಬರ್ತಯತಿ ಅಂತಹೇಳಿ ಮಪ್ತಿ ಡ್ರೆಸ್ ಹಾಕೊಂಡ ರಾತ್ರಿ ರೌಂಡ್ಸಗಿ ಹೋಗೂವ ಪ್ರಸಂಗಗಳು ಇರ್ತಾವು. ಅದು ಯಾರಿಗೂ ಗೊತ್ತ ಆಗುವಂಗಿಲ್ಲ. ಒಮ್ಮೆ ಎಲ್ಲಾರು ಹೊಗೂದು ಅಂದ್ರ ಹೊಗೂದನ. ಒಮ್ಮೆ ಹಿಂಗ್ ಹ್ವಾದಾಗ ಎಲ್ಲಾರೂ ಒಂದಕಡೆಗೆ ಇರೂದು ಬ್ಯಾಡ, ಬ್ಯಾರೆ ಬ್ಯಾರೆ ಕಡೆ ಮರೀಗಿ ನಿಂತ ಯಾರರೆ ಡೌಟ್ ಬರೂ ಜನಾ ತಿರಗಾಡ್ತಿರ್ತಾರು, ಎನರೆ ಮಾಹಿತಿ ಸಿಕ್ರ ಪಟ್ಟಂತ ಎಲ್ಲಾರು ಅಲ್ಲಿ ಬರ್ಬೇಕ ಅಂತ ಹೇಳಿ ಚಲ್ಲಾಪಿಲ್ಲಿ ಆಗಿ ರೌಂಡ್ಸ್ ಮಾಡಾಕ ಸುರು ಮಾಡಿದ್ವಿ. ರಾತ್ರಿ 2 ಗಂಟೆ, ಒಮ್ಮಿಲೆ ಮಳಿ ಬರಾಕ್ ಸುರುಮಾಡಿತು. ಛತ್ರಿ ಸೈತ್ ತಂದಿರ್ಲಿಲ್ಲ. ಮಳಿ ನಿಲ್ಲೂತನಕಾ ಆಸರಕ್ಕ ನಿಂತ್ರ ಆತೂ ಅಂತ ಅಲ್ಲೆ ಇದ್ದ ಯಾರದೋ ಗೇಟ್ ಸರಿಸಿ ಅಲ್ಲೆ ಮನೀ ಆಸರಕ್ಕ ನಿಂತಿದ್ದೆ. ನಿಂತ ಇನ್ನೂ 15 ನಿಮಿಷ ಆಗಿರ್ಲಿಲ್ಲ ಕಂಟ್ರೊಲ್ ರೂಮ್ ನಿಂದ ವಯರ್ ಲೆಸ್ ಮೆಸೆಜ್ ಬಂತು “ ಇಂತಿಂತ ಎರಿದೊಳಗ ಕಳ್ಳರ ಬಂದಾರು ಅಂತ 100 ನಂಬರಿಗೆ ಕಾಲ್ ಬಂತೈತಿ ಎಲ್ಲಾರೂ ಆ ಕಡೆ ಗಮನ ಕೊಡ್ರಿ, ಕಳ್ಳ ಯಾವ್ದ ಕಾರಣಕ್ಕೂ ತಪ್ಪಿಸ್ಕೊಳ್ಳಬಾರ್ದು” ಅಂತ. ಎನಪಾ ಇದು ಹಿಂತಾ ವ್ಯಾಳೆಯೊಳಗ ಈ ಕಳ್ಳ ಬರ್ಬೇಕಾ, ಈ ಮಳಿ ಬ್ಯಾರೆ ನಿಂತಿಲ್ಲ. “ನೋಡೆ ಬಿಡೂನು ತೊಸ್ಕೊಂಡ್ರ ತೊಸ್ಕೊಳ್ಳಿ, ಒಬ್ಬ ಕಳ್ಳರೆ ಸಿಗ್ತಾನು”  ಅಂತ ಹೊರಗ ಬಂದ ಎಲ್ಲಾ ಕಡೆ ಟಾರ್ಚ್ ಹಾಕಿ ಹುಡ್ಕತಿರಬೇಕಾದ್ರ ಎಲ್ಲಾ ಕಡೆ ರೌಂಡ್ಸ್ ಇರೂ ನಾಲ್ಕೈದ್ ಜೀಪ್, ಐದಾರ್ ಸೈಕಲ್ ಮೊಟರ ಒಳಗ ನಮ್ಮ ಪೊಲೀಸರು ಬಂದ ಗರೀಷ್ಠ ಬಲ ಇಟ್ಕೊಂಡು ಅರ್ದ ತಾಸ ಹುಡ್ಕಿದ್ರೂ ಕಳ್ಲ ಸಿಗ್ಲೇ ಇಲ್ಲ. ಇನ್ನೊಮ್ಮಿ ಯಾವ್ ಎರಿಯಾ ಅಂತ ಕನ್ಪರ್ಮ ಮಾಡ್ಕೊಳ್ಳೂನು ಅಂತ ಕಂಟ್ರೋಲ್ ರೂಮ್ ಗೆ ಪೋನ್ ಮಾಡಿ ವಿಚಾರ ಮಾಡಿದಾಗ ಅವ್ರು ಒಂದ ಮೊಬೈಲ್ ನಂಬರ್ ಕೊಟ್ಟು ಹಿಂತಾವ್ರು ಪೋನ್ ಮಾಡಿದ್ರು, ಅವ್ರನ್ನ ಪೊನ ಮಾಡಿ ಕೇಳಿದ್ರ ಮಾಹಿತಿ ಸಿಗಬಹುದು ಅಂದಾಗ, ನಾವು ಆ ನಂಬರಿಗೆ ಪೊನ್ ಮಾಡಿ ವಿಚಾರ ಮಾಡಿ ಅವ್ರ ಮನಿಗಿ ಹೊದಾಗ, ನಾ ಆಸರೆಗೆ ನಿಂತ ಮನೆ ಅದು. ಎಲಾ ಇವ್ನ್ ಇಷ್ಟೊತನ್ಕಾ ಇಲ್ಲೆ ಇದ್ನಿ ಎಲ್ಲೆಂಗ ಕಳ್ಳ ಬಂದಪಾ ಅಂತ ಬಾಗಲಾ ತಗಿಸಿ ವಿಚಾರ ಮಾಡಿದಾಗ “ ಇಲ್ಲಿ ಅರ್ದಾ ತಾಸ ಹಿಂದ ಯಾರೊ ಬಂದ ನಿತಿರ್ದು, ಅದಕ್ಕ ಡೌಟ್ ಬಂದ 100 ನಂಬರಿಗೆ ಪೋನ್ ಮಾಡಿದೆ ಅಂದಾಗ ನನಗ ನಗಬೆಕೋ ಅಳಬೆಕೋ ಅಂತ ಗೊತ್ತ ಆಗ್ಲಿಲ್ಲ. ಯಾಕಂದ್ರ ಅರ್ದತಾಸ ಹಿಂದ ನಾನ ನಿಂತಿದ್ದೆ, ನನ್ನ ನೋಡಿ ಕಳ್ಳ ಅನ್ಕೊಂಡು ಅವ್ರು 100 ನಂಬರಿಗೆ ಪೊನ್ ಮಾಡಿದ್ರು.  ಈ ಮಳಿ ಅನ್ನೂದು ಪೊಲೀಸ್ರನ್ನು ಕಳ್ಳನ ಮಾಡಿ ಇಟ್ಟಿತಲ್ಲಪಾ ಅಂತ ಯೊಚ್ನೆ ಮಾಡ್ತಿರಬೇಕಾದ್ರ ನಮ್ಮ ಎಲ್ಲಾ ಪೊಲೀಸರು ನನ್ನನ್ನ ಕಳ್ಳನ ತರಾ ನೋಡ್ಕೊಂತ ಮನೀಗಿ ಹ್ವಾದ್ರು .
          ಇಷ್ಟೆಲ್ಲಾ ಆದ್ರೂ ನಮಗ ಮಳಿ ಅನ್ನೂದು ಬೇಕು. ನಾವು ಪೊಲೀಸರು ಅನ್ನೂಕ್ಕಿಂತ ಸಮಾಜದಾಗ ಇರಾವ್ರು ಅನ್ನುದು ಯೊಚನೆ ಮಾಡಬೇಕಾಗ್ತೈತಿ.  ನೀರು ಅನ್ನೂದು ಜೀವಜಲ. ಈ ಪ್ರಪಂಚದಾಗ ನೀರು ಇಲ್ಲಾಂದ್ರ ಯಾವ್ದೂ ಕಲ್ಸ ಆಗೂದಿಲ್ಲ. ನಮಗ ಎಷ್ಟ ತ್ರಾಸ ಆದ್ರು ಸಹಿಸ್ಕೊತೀವಿ. ಆದ್ರೂ ಮಳಿ ಬರ್ಲಿ. ಅದಕ್ಕ ನಮ್ಮ ಕಡೆ ಹಿರ್ಯಾರು ಹೇಳ್ತಾರು ಮಳಿ ಆದ್ರ ಕೆಟ್ಟಲ್ಲ, ಮಕ್ಕಳ ಉಂಡ್ರೂ ಕೆಟ್ಟಲ್ಲ. ಮಲಿ ಬಂದ್ರ ನಮ್ಮ ಅಂತರಾಳದ ಸೆಲ್ಯೂಟ್ ಅದಕ್ಕ ಇದ್ದ ಇರ್ತದ.
-ಶ್ರೀಶೈಲ ಮಗದುಮ್ಮ .

ಬೇರು ಕೊಟ್ರ ಇಡೀ ಗಿಡಾನ ನಂದ ಅಂದ್ಲು

ಮೂರುಸಂಜಿ ವೆಳೆರವಿವಾರ ಆದ್ದರಿಂದ ಕೆಲಸಕ್ಕ ಹೋಗಿರ್ಲಿಲ್ಲ, ಒಂದೀಟ ವಿರಾಮ ಮಾಡ್ಕೊಂಡು ಚಹಾ ಕುಡ್ಕೋಂತ ಮೊಬೈಲನ್ಯಾಗ ಪೇಸ್ ಬುಕ್ ನೋಡ್ಕೊತ್ ಸಂಜೀ ಟೈಮ್ ಸುಖ ಅನುಭವಿಸ್ಕೊಂತ ಕೂತಿದ್ದೆಟನ್ ಅಂತ ಪೇಸ್ ಬುಕ್ಕದಾಗ ಒಂದಮೆಸೆಜ್ ಬಂತುನೋಡಿ ರಿಪ್ಲೈ ಮಾಡೊಕ್ಕೂ ಮುಂಚೆನ ಅವರು ಯಾರ ಅಂತ ತಿಳ್ಕೊಳ್ಳೊದು ಚಾಳಿಯಾಗಿದ್ದರಿಂದ ಅವರ ಪೂರ್ತಿವಿವರ ನೋಡಿದಾಗ ಅವರೂ ನಮ್ಮ ಉತ್ತರ ಕರ್ನಾಟಕದವ್ರು ಅದರಾಗೂ ನಮ್ಮೂರಿನ ಮಗ್ಗಲದಾಗಿನ ಆದರ ಯಾವತ್ತೂ ಹೆಸರುಕೇಳಲಾರದ ಒಂದು ಹುಡುಗಿ ಹಾಯ್ ಅಂತ ಮೆಸೇಜ್ ಮಾಡಿದ್ಳುಕೂನ ಗುರ್ತ ಇಲ್ಲದವ್ರಿಗಿ ಯಾವತ್ತೂ ಫೇಸ್ ಬುಕ್ ಒಳಗ ಸಲುಗೆಕೊಡುದಿಲ್ಲ ನಾ. ಆದರೆ ನನಗ ಉತ್ತರ ಕರ್ನಾಟಕದವರು ಅಂದರಯಾರೇ ಇರ್ಲಿ ಅವರು ನಮ್ಮ ಮನೀ ಮಂದಿ ತರಾ ಅಂತ ನನ್ನಒಳ ಮನಸ್ಸು ಭಾವಿಸಿ ಬಿಡತದಅದರಾಗೂ ನಮ್ಮ ಊರಿನ ಸುತ್ತ ಮುತ್ತಲಿನ ಪ್ರದೇಶದವರಿದ್ದರಂತೂ ನಡುವಯಸ್ಸಿನಹೆಣ್ಣುಮಕ್ಕಳ ಬಂಗಾರ ಕಂಡ್ಹಾಂಗ್ ಅವರ ಕಡೆ ಮನಸ್ಸು ಆಕರ್ಷಣೆ ಆಗಿ ಬಿಡ್ತದಅದಕ್ಕೆ ಕಾರಣಾನೂ ಐತಿ.   ಟಿನೇಜ್(ಹದಿವಯಸ್ಸುಅಂತಾರಲ್ಲ ಅದನ್ನ ಯಾವತ್ತೂ ಒಂದಕಡೆ ಅನುಭವಿಸಿ ಬಿಡಬೇಕು, ಒಂದೀಟ್ ಒಂದೂರಾಗ, ಇನ್ನೊಂದ ಸ್ವಲ್ಪ ಇನ್ನೊಂದೂರಾಗ ಅಂತ ಕಳದ್ರ ಜೋರ ಬಾಯಾರಿಕೆ ಆದವ್ರು ನೀರ ಕುರಿಯುವಾಗ ಅರ್ದಕ್ಕ ಕಸ್ಕೊಂಡಾಂಗ್ ಆಗ್ತದ.  ನಮ್ಮಪರಿಸರದ ಸೊಗಡಿನ್ಯಾಗ ಕಳೆಯುವ ಪ್ರಮುಖ ಘಟ್ಟದಾಗ ಯಾವುದೋ ಗೊತ್ತಿಲ್ಲದ, ಕನ್ನಡಾನ ಆದರೂ ಅಪರಿಚಿತದಂತಿರುವಭಾಷಾಶೈಲಿಯ ಊರಿಗೆ ನೌಕರಿ ಹಿಡ್ಕೊಂಡ ಬಂದಬಿಟ್ಟಿದ್ದೆ. ನನಗ ಮನೆ ಎಷ್ಟ ಅಟ್ಯಾಚಮೆಂಟ್ ಇತ್ತಂದ್ರ ಶಾಲಾ ವಾರ್ಷಿಕಪ್ರವಾಸಕ್ಕೂ ಎಂದೂ ಹೊಗಲಾರದ ಮನುಷ್ಯಾ ನಾ. ಆದರೆ ಸರಕಾರಿ ನೌಕರಿ ಸಿಕ್ಕ ಕೂಡಲೆ ಮನಸ್ಸಿಲ್ಲದ ಮನಸ್ಸಿನಿಂದ ಮನೀಬಿಟ್ಟ ಒಂದ ಹೊಸಾಲೋಕಕ್ಕ ಕಾಲಿಟ್ಟಾಗ ಕಾಡಿನ್ಯಾಗಿನ ಜಿಂಕಿ  ತಂದ ಸಂತ್ಯಾಗ ಕಟ್ಟಿದಾಂಗ ಆಗಿತ್ತ  ನನ್ನ ಪರಿಸ್ಥಿತಿಎಲ್ಲಿ ಹ್ವಾದರೂಎಲ್ಲಾರ್ನೂ ಟಕಾ ಮಕಾ ನೋಡೂದುಯಾರರೇ ಮಾರ್ಕೆಟನ್ಯಾಗಬುಕ್ ಸ್ಟಾಲ್ಬೆಳಗ್ಗೆ ವಾಕಿಂಗ್ ಹೋದಾಗ ಎಲ್ಲೆ ನಮ್ಮ ಕಡೆಭಾಷೆ ಮಾತಾಡಾವ್ರು ಕಂಡರ ಅಥವಾ ದನಿ ಕೇಳಿದ್ರ ಸಾಕ ಕೇಳ್ಕೊತ ನಿಂತ ಬಿಡತ್ತಿದ್ದೆಕೆಲವೊಮ್ಮೆ ಅವರನ್ನು ಮಾತಾಡಿಸಿಯಾವೂರುಇಲ್ಲಿ ಏನ್ ಮಾಡ್ತೀರಿನಾನೂ ನಿಮ್ಮ ಊರಿನ ಕಡೆಯಾಂವ ಅಂತೆಲ್ಲಾ ಮಾತಾಡಿ ಪರಿಚಯ ಮಾಡ್ಕೊತಿದ್ದೆಕೆಲವೊಬ್ರು ಸರಿಯಾಗಿ ಮಾತಾಡಲ್ಲದ ತುಡುಗರನ್ನ ಕಂಡಾವ್ರ ತರಾ ಬ್ಯಾರೆ ದೃಷ್ಟಿಯಿಂದನ ನೋಡಾವ್ರು, ಇಂತ ಟೈಮನ್ಯಾಗ ಚಲೋಮಾತಾಡ್ಸಿದ್ನಿ ಇವ್ರನ್ನ ಅಂತ ಮುಜುಗರನೂ ಆಗಿ ಇನ್ನ ಯಾವತ್ತೂ ಪರಿಚಯ ಇಲ್ಲದಾವ್ರನ್ನ ಮಾತಾಡ್ಸಬಾರ್ದು ಅಂತ ಮನಸ್ಸಹೇಳಿದ್ರೂ ನಮ್ಮ ಊರಿನ ಕಡೆ ಸೆಳೆತ ಗುಲಗಂಜಿಯಷ್ಟೂ ಕಮ್ಮಿ ಆಗಿರ್ಲಿಲ್ಲನಮ್ಮ ಕಡೆ ಒಂದ ಗಾದೆ ಮಾತ ಐತಿ, ತವರು ಮನೆನಾಯಿ ಸಿಕ್ಕರನೂ ಉಗುರು ಕಣ್ಣಾಗೂ ಉಮೇದಾರ ಅಂತ, ಅಷ್ಟ ಸಂತೋಷ ಉಕ್ಕಿ ಹರಿತೈತಿ.
ಇದೆಲ್ಲಾ ಹಕ್ಕಿಕತ್ ಐತಿ ಅನ್ನೋ ಕಾರಣದಿಂದಾನೋ ಎನೋ ನಾನು ತಿರುಗಿ ಹಲೋ ಅಂತ ಆ ಹುಡುಗಿಗೆ ರಿಪ್ಲೈ ಕೊಟ್ಟೆ.ನಂತರ ನನಗೂ ಸ್ವಲ್ಪ ಕುಲ್ಲಾ ಟೈಮ್ ಇದ್ದದ್ದರಿಂದಾನೋ ಏನೋ ಮಾತು “ಆರಮ್ ಅದಿರಿಲ್ಲೋಏನ್ ಮಾಡ್ಕೊಂಡದಿರಿಏನೇನ್ಓದ್ತೀರಿಹವ್ಯಾಸಗಳು ಯ್ಯಾವ್ಯಾವ” ಹಿಂತಾವ ಸುಮ್ನ ಕಾಲಿ ಪುಕ್ಕಟ ಮಾತೆಲ್ಲಾ ಮುಗ್ಸುವಾಗ 2 ಗಂಟೆಕ್ಕ ಹೆಚ್ಚ ಚಾಟಿಂಗ್ಮಾಡಿದ್ದಗೊತ್ತ ಆಗಿರಲಿಲ್ಲಆದರೆ ಮುಂದಿಂದ ಒಂದು ಮೆಸೆಜ್ ನನಗೆ ಭಾರಿ ಕುತುಹಲ ಹುಟ್ಟಿಸಿತ್ತುಅಕಿ “ಹುಡ್ಗಾ ಹುಡ್ಗಿ ಬಾಳಕ್ಲೋಸ್ ಆದಮ್ಯಾಲ ಹೇಳುವ ಮಾತ ಯಾವ್ದ?” ಅಂತ ಮೆಸೇಜ್ ಕಳ್ಸಿದ್ಲುಆವಾಗ ನಾ ಒಂದ ಸ್ವಲ್ಪ ಕಾಮಿಡಿಯಾಗ್ಲಿ ಅಂತಅನ್ಕೊಂಡು “ ಲವ್ ಯೂ ಅಂತಾರೆನೋ” ಅಂತ ರಿಪ್ಲೈ ಮಾಡಿ ಅಕಿ ಮುಂದ ಏನ್ ಹೇಳ್ತಾಪಾ ಅಂತ ಮೆಸೆಜ್ ಗೆ ಕಾಯ್ಕೋತ್ಕುಂತಾಗನನಗಒಂದ ಶಾಕ್ ಆಗಿದ್ದು ಅಕಿ  “ಸೇಮ್ ಟು ಯೂ”   ಮೆಸೇಜ್ ಕಳ್ಸಿ ಬಿಟ್ಟಾಗಆವಾಗ ನಾ ಯಾಕ್ರಿ ಸೇಮ್ ಟೂ ಯೂಅಂತ ಹೇಳಿದ್ರಿ ಅಂತ ಹೇಳಿದಾಗ ಅಕಿ ನೀವ  ಲವ್ ಯೂ ಅಂತ ಹೇಳಿದ್ರಲಾ ಅದಕ್ಕ ಅಂದ್ಲು.ನನಗ ಹೊಟ್ಟಿ ತೊಳಿಸಿದಂಗಾಗಿನಾಯಾವಾಗ್ರಿ ಹೇಳ್ದೆನೀವ್ ಕೆಳಿದ್ದಕ್ಕ ನಗಿಚ್ಯಾಟಕಿ ಮಾಡ್ಯೇನಿ ಅಷ್ಟ, ಅಂತ ಮೆಸೇಜ್ ಮಾಡಿ ತೆಲಿಮ್ಯಾಲ್ ಕೈ ಹೊತ್ಕೊಂಡ್ಕುಂತೆ.
 ಶಾಕ್ ನಿಂದ ಇನ್ನೂ ಸುದಾರಣೆ ಕಂಡಿರ್ಲಿಲ್ಲ ಆವಾಗ ಅಕಿದ ಮೆಸೆಂಜರ್ ನಲ್ಲಿ ಕಾಲ್ ಬಂತುಇದೊಳ್ಳೆ ಕಥೆಆಯ್ತಲ್ಲಪಾ ನಾ ಯಾರ ಹಸರ ತಪ್ಪಲಮ್ಯಾಲ ಕಾಲ ಇಟ್ಟಾಂವ ಅಲ್ಲ ನನಗ ಯಾಕ  ವ್ಯಾಳೆ ಬಂತಪಾ ಅಂತ ಕಟ್ ಮಾಡಿದರೂಮತ್ತೊಮ್ಮೆ ಕಾಲ್ ಮಾಡಿದ್ಲುಇದಬಿಡೂ ಕರ್ಮ ಅಲ್ಲ ಅಂತೇಳಿ ರಿಸಿವ್ ಮಾಡಿ ಏನವಾ ಯಾಕ ಕಾಲ್ ಮಾಡಿದಿ? ಅಂತ ಹೇಳಿದಾಗಮತ್ತ ಅಷ್ಟೊತ್ತು ಮೆಸೇಜ್ ನಲ್ಲಿ ಮಾತಾಡಿದ್ದ ಮಾತಕೇಳಾಕ್  ಸುರು ಮಾಡಿದ್ಲುಅಷ್ಟರಾಗ ನಾ ಇದನ್ನ ಇಲ್ಲಿಗೆ ಮುಗಿಸಬೇಕೆಂತ “ನನಗೆ ಕೆಲಸ ಐತ್ರಿಮತ್ತ ಯಾವಾಗರೆ ಮಾತಾಡ್ತೀನಿ ಇವಾಗ ಇಡ್ತನ್ರಿ ಇನ್ನ”  ಅಂದಾಗ ಮೂರಗುಂಡಿಗಿ ಇದ್ದಾವ್ರಿಗೂ  ಎದೀನಡುಗಿಸುವಂತಾ ಮಾತು ಕಾದಿತ್ತು. “ ಏನ್ರಿ ನೀವ, ಮದುವಿ ಆಗೂ ಹುಡ್ಗಿ ಜೋಡಿ ಮಾತಾಡುಕ್ಕಿಂತಾ ಬ್ಯಾರೆ ಕೆಲ್ಸಾ ಐತಿ ನಿಮ್ಗ,ಅದೂ ಇಷ್ಟೊತ್ನ್ಯಾಗ?” ಅಂತ ಗಂಭೀರವಾದ ದನಿಯೊಳಗ ಹೆಳಿದಾಗ ತಲೆ ಸುತ್ತು ಬರೋದೊಂದ ಬಾಕಿ ಇತ್ತು.ನಾ ಏನ್ ಹಿಂದಿನಜನ್ಮದಾಗ ಏನ್ ಪಾಪ ಮಾಡ್ನೋ ಎನೋ ಅದ ಪೇಸ್ ಬುಕ್ ರೂಪದಾಗ ಬಂದ ನನ್ ಕಾಡಾತೇತಿ ಅಂತ ಪೋನ್ ಕಟ್ ಮಾಡಿದೆ.
ಮತ್ತೊಮ್ಮಿ ಕಾಲ್ ಬಂತಪಾಆವಾಗ ನನ್ನ ಸಂಯಮ ಅನ್ನೂದು ಕಟ್ಟಿ ಒಡೆದಿತ್ತು. “ಅಲ್ರಿ ಮೇಡಮ್ ನಾನ್ ಯಾವಾಗನಿಮ್ಮನ್ನ ಮದವಿ ಆಗ್ತಿನಂತ ಹೇಳೆನಿನಿಮ್ಮ ಜೋಡಿ ಮಾತಾಡಿದ್ದ ತಪ್ಪ ಆತೇನುಕೈಯಾಗ ಬೇರ ಕೊಟ್ರ ಇಡೀ ಗಿಡಾನ ನಿಂದಅಂತಿಯಲ್ಲವಾನನ್ನ ಪಾಡಿಗೆ ನನ್ನ ಬಿಟ್ಟಬಿಡ ಯವ್ವಾ ನನ್ನ ಎಂಗೇಜ್ ಮೆಂಟ್ ಆಗೇತಿ ನನ್ನಮ್ಯಾಲ ತಪಾ ತಕ್ಕೊಂಡ ಒಂದು ಹೆಣ್ಣಊರಾಗ ಕುಂತಾಳು ಅಕಿಗಿ ಎಲ್ಲರೇ ಇದ ಗೊತ್ತ ಆದ್ರ ಜಿಂವಾನ ಬಿಡ್ತಾಳು” ಅಂತ  ಎಂಗೇಜ್ ಮೆಂಟ್ ಆಗೇತಿ  ಅಂತ ಸುಳ್ಳ ಸುಳ್ಳಹೇಳಿ ಸಾಗ ಹಾಕೋಕೆ ನೋಡಿದಾಗಅಕಿಅಳಾಕ್ ಚಾಲು ಮಾಡಿದಳುನನಗೆ ಮೊದಲ ದುಃಖದಾಗ ಇರಾರ್ವರನ್ನ ಸಮಾದಾನಮಾಡಾಕ ಬರುದಿಲ್ಲಅದರಾಗ ಒಂದು ಹೆಣ್ಣು ಮಗಳ ಅಳಾಕ ಹತ್ಯಾಳು ಹಂತದ್ರಾಗ ಏನ್ ಮಾಡುದಪಾ, ಯಪ್ಪಾ ಸಿದ್ದಾರೂಢನನಗೆ ಯಾಕೆ ಮತ್ತ ಮತ್ತ ಪರಿಕ್ಷೆ ಮಾಡ್ತೀಪಾ ನನ್ನ ಇದರಾಗಿಂದ ಪಾರಮಾಡು ನಿಗ ಜೋಡ ಕಾಯಿ ಒಡೀತಿನಿ  ಅಂತ ಅಲ್ಲೇದೇವರಿಗೆ ಒಂದು ವೈಯರ್ ಲೆಸ್ ಸಂದೇಶ ಕಳಿಸಿ ಅಕಿಏನ ಹೇಳ್ತಾಳ ಅಂತ ಕಾಯುವಾಗಜಲಪಾತದಿಂದ ದುಮ್ಮಿಕ್ಕಿ ಬಂದ ನೀರುವಿಶಾಲ ನೆಲದಾಗ ಹರಿಯುವಂಗ ಅಳುವ ವ್ಯಲಾಸಿಟಿಯನ್ನ ಕಮ್ಮಿ ಮಾಡಿ ಸಮಾದಾನಮಾಡ್ಕೊಂಡು ನೀವು ನನಗ ಮೋಸಾಮಾಡಾತೇರಿನೀವು ನನ್ನ ಮದುವಿ ಆಗುದಿಲ್ಲ ಅಂತಿದ್ರ ನನ್ನ ಜೋಡಿ ಯಾಕ್ ಚಾಟಿಂಗ್ ಮಾಡಾಕ್ ಹೋಗ್ತಿದ್ರಿನನಗ  ಲವ್ಯೂ ಅಂತ ಯಾಕ್ ಹೇಳ್ತಿದ್ರಿನಾ ಪೋಟೋ ಹಾಕಿದ್ದಕ್ಕ ಯಾಕ್ ನೈಸ್ಕ್ಯೂಟ್ ಅಂತ ಕಾಮೆಂಟ್ ಮಾಡಿದ್ರಿನನಗ ತುಂಬಾಬೇಜಾರ್ ಆಗೇದರಿಅಂತೇಳಿ ಒಂದ ಉಸ್ರನ್ಯಾಗ ಬೈಯಾಕ್ ಚಾಲೂ ಮಾಡಿದ್ಲು ಜಗತ್ತ ಹಿಂಗ್ ಬರೇ ಮೋಸಗಾರರತುಂಬ್ಯಾರುನಾ ಮಳ್ಳ ಅದನಿಸುಲಭವಾಗಿ ಮೋಸ ಹೊಕ್ಕೀನಿ ಎಲ್ಲಾರಿಗೂ, ಅಂತ ಇನ್ನೂ ಏನೇನೋ ಮಾತ ಹೇಳುವಾಗ ಬೆವರಬಂದ ಹಾಕಿದ್ದ ಬಟ್ಟೆಯೆಲ್ಲ ಮೈಗಿ ಅಂಟಕೊಂಡ ಬಿಟ್ಟೂ.
 ನಾ ಅರ್ದಕ್ಕ ತಡೆದು ಯವ್ವಾ ನೀನ ನಿನ್ನ ಸುತ್ತ ಭ್ರಮಾ ಲೋಕ ಹೆಣೆದುಕೊಂಡು ಅದು ತನ್ನಿಂದ ತಾನ ಕಳಚಿ ಬಿದ್ದಾಗಯಾರೋ ಕೆಡುವಿದ್ರು ಅಂತೇಳಿ ಯಾಕ್ ಅಳ್ಳಾತೇದಿಭ್ರಮಾ ಲೋಕದಿಂದ ಹೊರಗ ಬಾ ಮದುವೇ ಅಂದ್ರ ಅದನ್ನ ಇಷ್ಟ ಸಿಲ್ಲಿಯಾಗಿತಗೋ ಬ್ಯಾಡನಮ್ಮಪರಂಪರೆಯಾಗಲಿಸಮಾಜ ಆಗ್ಲಿ ಅದರಲ್ಲೂ ನಮ್ಮ ಕಾನೂನು ಆಗ್ಲಿ ಅದಕ್ಕ ದೊಡ್ಡ ಕಿಮ್ಮತ್ ಕೊಟ್ಟಾವನೀಯಾರ ಅಂತ ನನಗ ಪೂರ್ತಿ ಗೊತ್ತಿಲ್ಲನಿನ್ನ ನಾ ನೋಡಿಲ್ಲ ಸೈತ್ಹಂಗ ಇದ್ದಾಗ ಎರಡ ತಾಸ ನನ್ನ ಜೋಡಿ ಚಾಟ್ ಮಾಡಿ ನಾಯಾರ ಅಂತ ತಿಳ್ಕೊಳ್ಳದನ ನನ್ ಜೋಡಿ ಜೀವನ ಪೂರ್ತಿ ಇರಬೇಕ ಅಂತಿಯಲ್ಲಹಂಗೆಲ್ಲ ಅದನ್ನ ಹಗುರವಾಗಿ ತಗೋಬ್ಯಾಡ,ನೀನಂತೂ ತಗೊಂಡ್ರೂ  ನನಗ ನಂದ ಆದಂತ ಕೆಲವೊಂದ ಆಸೆ ಕನಸುಗಳು ಅದಾವವಾಸ್ತವವಾಗಿ ಬದುಕಾಕ ಕಲೀ ಅಂತೇಳಿಹೆಂಗೋ ಸಮಾದಾನ ಮಾಡಿ  ಚಾಟಿಂಗ್ ಮುಗಿಸಿದೆಎಲ್ಲಾ ಮುಗಿದು ಮಲ್ಕೊಳ್ಳೊನು ಅಂತ ತಯಾರಾದಾಗ ಮತ್ತೊಂದುಮೆಸೇಜ್ ಬಂತಪಾ “ನೀ ಇಲ್ಲದ ನಾ ಬದುಕುದಿಲ್ಲ” ಅಂತನನಗ ಖರೇನ ಕೈಕಾಲ್ ತಣ್ಣಗಾಗಿದ್ದು ಆವಾಗಹ್ಯಾಂಗ್